ಜಿ.ಸಿ ಚಂದ್ರಶೇಖರ್ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿಯ ಗಂಗೂರು ಎಂಬ ಸಣ್ಣ ಹಳ್ಳಿಗೆ ಸೇರಿದವರು, ಚಂದ್ರಶೇಖರ್ ಪ್ರಸಿದ್ಧ ಶಿಕ್ಷಣತಜ್ಞರು ಮತ್ತು ವಾಣಿಜ್ಯೋದ್ಯಮಿಗಳು , ಭಾರತದ ರಾಜ್ಯ ಸಂಸತ್ತಿನ ಮೇಲ್ಮನೆಯಾದ ರಾಜ್ಯ ಸಭೆ ಅಥವಾ ರಾಜ್ಯಗಳ ಕೌನ್ಸಿಲ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಾಗಿದ್ದಾರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಐ ಏನ್ ಸಿ ) ಸಂಸದರಾಗಿ ತಮ್ಮ ಮೊದಲ ಅವಧಿಗೆ ಪ್ರವೇಶಿಸಿದ್ದಾರೆ.
ಜಿ.ಸಿ ಚಂದ್ರಶೇಖರ್ ಈ ಹಿಂದೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು ,ಸರ್ವ ಶಿಕ್ಷಣ ಅಭಿಯಾನದ ಸಲಹಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು , ಮಾಜಿ ಕೆ.ಪಿ.ಸಿ.ಸಿ ಅಧ್ಯಕ್ಷರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ , ಅವರ ರಾಜಕೀಯ ವೃತ್ತಿಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿದ್ದಾರೆ .
ಚಂದ್ರಶೇಖರ್ ಅವರ ರಾಜಕೀಯ ಕಾರ್ಯವು ನಗರ ಆಡಳಿತದ ಸಮಸ್ಯೆಗಳಿಂದ ಬೆಂಗಳೂರು ಮತ್ತು ಬೆಂಗಳೂರಿಗರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಕೇಂದ್ರೀಕರಿಸುತ್ತದೆ, ಆಡಳಿತ ಮತ್ತು ಆರ್ಥಿಕ ಸುಧಾರಣೆಗಳ ಮೂಲಕ ಭಾರತವನ್ನು ರೂಪಾಂತರಿಸುವುದು, ನಮ್ಮ ಮಕ್ಕಳ ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸುವುದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಆಧುನಿಕ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಯಾವಾಗಲೂ ಪ್ರಾಥಮಿಕ ಆದ್ಯತೆಯಾಗಿರುತ್ತದೆ.
ಚಂದ್ರಶೇಖರ್ ಅವರ ಸೇವೆಗಳು ಮತ್ತು ಆಸಕ್ತಕರ ಕ್ಷೇತ್ರಗಳು ಹೀಗಿವೆ ಆರೋಗ್ಯ ಕ್ಷೇತ್ರಗಳು, ಮಹಿಳಾ ಸಬಲೀಕರಣ, ಆರೋಗ್ಯದ ವಿಷಯಗಳ ಬಗ್ಗೆ ಅರಿವು ಮೂಡಿಸುವುದು, ಕಾನೂನು ಹಕ್ಕುಗಳು, ಸಂಸ್ಕೃತಿಯನ್ನು ಆಚರಿಸುವುದು, ಧರ್ಮ ತಡೆಗೋಡೆಗಳಿಲ್ಲದೆಯೇ ಸಾಮಾಜಿಕ ಸಮಾನತೆಯನ್ನು ಪ್ರೋತ್ಸಾಹಿಸುವುದು.
ಜಿ.ಸಿ ಚಂದ್ರಶೇಖರ್ ಅವರು ಅನೇಕ ಸವಾಲಿನ ಕಾರ್ಯಯೋಜನೆಗಳು, ಹಣಕಾಸಿನ ವಿಷಯಗಳು, ನೀತಿಗಳು, ಯೋಜನೆಗಳು, ಕಲ್ಪನೆಗಳು ಮತ್ತು ಸಮಸ್ಯೆಗಳಿಗೆ ಉಪಕ್ರಮ ಪರಿಹಾರಗಳನ್ನು ನಿಭಾಯಿಸಲು ಸಮಗ್ರತೆ ಮತ್ತು ತಾಂತ್ರಿಕ ಕೌಶಲ್ಯಗಳಂತಹ ಪ್ರಮುಖ ಗುಣಗಳನ್ನು ಹೊಂದಿದ್ದಾರೆ, ಚಂದ್ರಶೇಖರ್ ಅವರು ತಮ್ಮ ಸನ್ನಡತೆ ಹಾಗು ರಾಜಕೀಯ ಮುತ್ಸದಿಯಾಗಿ ಅನೇಕ ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ.
ಶ್ರೀ ಚಂದ್ರಶೇಖರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದರು, ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾದಾಗ ತಮ್ಮ ಮಾತೃಭಾಷೆ ಕನ್ನಡ ಭಾಷೆಯಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು, ಅವರ ಈ ನಡೆ ಅನೇಕ ಜನರಿಂದ ಮೆಚ್ಚುಗೆ ಪಡೆದಿತು ,ಉಪ ರಾಷ್ಟ್ರಪತಿ ಹಾಗು ರಾಜ್ಯ ಸಭಾ ಅಧ್ಯಕ್ಷ ರಾಗಿರುವ ಶ್ರೀ ವೆಂಕಯ್ಯ ನಾಯ್ಡುರವರು ಜಿ.ಸಿ ಚಂದ್ರಶೇಖರ್ ಅವರ ಪ್ರಯತ್ನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಪ್ರಮಾಣವಚನ ಸಮಾರಂಭದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಜನಮನ್ನಣೆಯನ್ನು ಪಡೆಯುವುದರ ಜೊತೆಗೆ ವೈರಲ್ ಆಗಿತ್ತು.
ಆ ವಿಡಿಯೋದ ತುಣುಕು ಇಲ್ಲಿದೆ ನೋಡಿ