ದೂರದೃಷ್ಟಿತ್ವ ಹೊಂದಿರುವ ಅಧ್ಯಕ್ಷರು ಇದ್ದರೆ ನಮ್ಮ ಗುರಿ ತಲುಪುವುದು ತುಂಬಾ ಸುಲಭ

0 Comment
1180 Views

ಪ್ರಜಾಪ್ರಭುತ್ವದ ಆಶ್ಚರ್ಯಕರ ಸಂಗತಿಗಳಲ್ಲಿ ಮಹತ್ತರ ವಿಷಯವೇನೆಂದರೆ ಜನರ ದೃಷ್ಟಿಕೋನವನ್ನು ಪ್ರತಿನಿಧಿಸುವ ರಾಜಕೀಯ ನಾಯಕರು ಮತ್ತು ಅಧಿಕಾರಶಾಹಿಗಳಿಬ್ಬರ ಶಕ್ತಿಯನ್ನು ಒಟ್ಟುಗೂಡಿಸಿ ಅತ್ಯುತ್ತಮವಾದ ಪರಿಣಾಮಗಳನ್ನು ಹೊರತರುವುದು.

ಸ್ಪಷ್ಟ ದೃಷ್ಟಿಕೋನವಿಲ್ಲದೆ ಹೋದರೆ ಅಧಿಕಾರಶಾಹಿಯ ಪ್ರತಿಭೆ ವ್ಯರ್ಥವಾಗುತ್ತದೆ. ಹೀಗಾಗಿ, ಒಬ್ಬ ರಾಜಕೀಯ ಮುಖಂಡನಿಗೆ ಉತ್ತಮ ದೃಷ್ಟಿಕೋನವಿದ್ದರೆ ರಾಕೆಟ್ ಅನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋಗಬಹುದು.

ಆರಂಭವಾದಂದಿನಿಂದ ಕಳೆದ 40 ವರ್ಷಗಳಲ್ಲಿ ಜಲ ಮಂಡಳಿ ಸಾಧಿಸಬೇಕೆಂದು ಬಯಸಿದ್ದ ಅಷ್ಟು ಪ್ರಗತಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ( KUWSDB) ಅಧ್ಯಕ್ಷ ಜಿ.ಸಿ. ಚಂದ್ರಶೇಖರ್ ರವರು ಕೇವಲ ಒಂದು ವರ್ಷದಲ್ಲಿ ಸಾಧಿಸಿ ತೋರಿಸಿದರು.

ಕಳೆದ 40 ವರ್ಷಗಳಲ್ಲಿ 33 ಅಧ್ಯಕ್ಷರು ಇದ್ದರೂ ಸಹ ಇಷ್ಟು ವೇಗದಲ್ಲಿ ಪಾರದರ್ಶಕತೆ ಮತ್ತು ಪಾಲ್ಗೊಳ್ಳುವಿಕೆಯೊಂದಿಗೆ ಯಾರೂ ಕೆಲಸ ಮಾಡಲು ಸಾಧ್ಯವಾಗಲಿಲ್ಲ, ಪ್ರತಿಷ್ಠಿತ ಐಐಐಟಿ ಬೆಂಗಳೂರಿನ ನೇತೃತ್ವದ ಐಟಿ ಅಡ್ವೈಸರಿ ಕಮಿಟಿ ಇರಬಹುದು ಅಥವಾ 24/7 ಚೆನ್ನೈ ಮಹಾಮಳೆಯ ಸಂತ್ರಸ್ತರಿಗೆ ಉಪಯೋಗವಾಗುವಂತೆ ಕಾಲ್ ಸೆಂಟರ್ ನಂತಹ ಕೆಲಸಗಳನ್ನು ಪ್ರತಿಷ್ಠಿತ ಗೂಗಲ್ ನಂತಹ ಸಂಸ್ಥೆಗಳು ಗುರುತಿಸಲ್ಪಟ್ಟಿದೆ,ಇಂತಹ ಕಾರ್ಯಗಳು ಮಂಡಳಿಯ ನಿರೀಕ್ಷೆಗಳನ್ನು ಮೀರಿಸಿದೆ.

ಕಡಿಮೆ ಪೇಪರ್ ಕೆಲಸಗಳು, ಏಕ ಮುಖವಾದ ಮೊಬೈಲ್ ಅಪ್ಲಿಕೇಶನ್ ಮೂಲಕ ನಾಗರಿಕರಿಗೆ ಬೇಡಿಕೆಗಳನ್ನ ಈಡೇರಿಸುವುದು ಮತ್ತು ಸಮರ್ಥನೀಯ ಶುಚಿಯಾದ ನೀರನ್ನು ಒದಗಿಸುವುದು
ಆಗಿದೆ ,ಇದೆ ನಿಟ್ಟಿನಲ್ಲಿ ನಮ್ಮ ಗುರಿಯತ್ತ ಸಾಗುತ್ತಿದ್ದೇವೆ.

ಮಣಿವಣ್ಣನ್.ಪಿ
ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ( KUWSDB)


ತಮ್ಮ ಮಾತೃಭಾಷೆ ಕನ್ನಡದಲ್ಲಿ ಜಿ.ಸಿ ಚಂದ್ರಶೇಖರ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು

ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಎಲ್ಲಾ ಮೂರು ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಗಳನ್ನು ಗೆದ್ದುಕೊಂಡರು...