ತಮ್ಮ ಮಾತೃಭಾಷೆ ಕನ್ನಡದಲ್ಲಿ ಜಿ.ಸಿ ಚಂದ್ರಶೇಖರ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು

0 Comment
1143 Views

ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಎಲ್ಲಾ ಮೂರು ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಗಳನ್ನು ಗೆದ್ದುಕೊಂಡರು

ಚುನಾವಣಾ ಆಯೋಗ ನಡೆಸಿದ ಈ ಪ್ರಕ್ರಿಯೆಯಲ್ಲಿ ಮೂರು ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರ ರಾಜಕೀಯ ಕಾರ್ಯದರ್ಶಿ ಜಿ.ಸಿ ಚಂದ್ರಶೇಖರ್ ಅವರು ಪಕ್ಷದ ಮೂರನೇ ಅಭ್ಯರ್ಥಿಯಾಗಿದ್ದಾರೆ. (46). ಪಕ್ಷದ ಮೊದಲ ಅಭ್ಯರ್ಥಿಯಾಗಿ ದಲಿತ ಬರಹಗಾರ ಎಲ್ ಹನುಮಂತಯ್ಯ 44 ನೇ ಸ್ಥಾನದಲ್ಲಿದ್ದರು, ಸೈಯದ್ ನಸೀರ್ ಹುಸೇನ್ 42 ನೇ ಸ್ಥಾನ ಪಡೆದಿದ್ದರು .

ಶ್ರೀ ಚಂದ್ರಶೇಖರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದರು, ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾದಾಗ ತಮ್ಮ ಮಾತೃಭಾಷೆ ಕನ್ನಡ ಭಾಷೆಯಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು, ಏಕೆಂದರೆ ರಾಜ್ಯದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗುವವರು ಪ್ರಾದೇಶಿಕತೆಯನ್ನು ರಕ್ಷಿಸುವ ಅಮೂಲ್ಯ ಜವಾಬ್ದಾರಿಯನ್ನು ಹೊತ್ತಿರುತ್ತಾರೆ , ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ-ಆಡಳಿತ , ಜಾನಪದ ಮತ್ತು ಜನರ ಅಭಿಪ್ರಾಯಗಳನ್ನೂ ರಕ್ಷಿಸುವ ಜೊತೆಗೆ ರಾಜ್ಯದ ಜಲ ಮತ್ತು ಭಾಷೆಗೆ ಸಂಬಂಧಿಸಿದಂತೆ ಜನರ ಒಕ್ಕೊರಲಿನ ಧನಿಯಾಗಿರಬೇಕಾಗಿರುತ್ತದೆ .ಅವರ ಈ ನಡೆ ಅನೇಕ ಜನರಿಂದ ಮೆಚ್ಚುಗೆ ಪಡೆದಿತು ,ಉಪ ರಾಷ್ಟ್ರಪತಿ ಹಾಗು ರಾಜ್ಯ ಸಭಾ ಅಧ್ಯಕ್ಷರಾಗಿರುವ ಶ್ರೀ ವೆಂಕಯ್ಯ ನಾಯ್ಡುರವರು ಜಿ.ಸಿ ಚಂದ್ರಶೇಖರ್ ಅವರ ಪ್ರಯತ್ನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಪ್ರಮಾಣವಚನ ಸಮಾರಂಭದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಜನಮನ್ನಣೆಯನ್ನು ಪಡೆಯುವುದರ ಜೊತೆಗೆ ವೈರಲ್ ಆಗಿತ್ತು.


ದೂರದೃಷ್ಟಿತ್ವ ಹೊಂದಿರುವ ಅಧ್ಯಕ್ಷರು ಇದ್ದರೆ ನಮ್ಮ ಗುರಿ ತಲುಪುವುದು ತುಂಬಾ ಸುಲಭ

ಪ್ರಜಾಪ್ರಭುತ್ವದ ಆಶ್ಚರ್ಯಕರ ಸಂಗತಿಗಳಲ್ಲಿ ಮಹತ್ತರ ವಿಷಯವೇನೆಂದರೆ ಜನರ ದೃಷ್ಟಿಕೋನವನ್ನು ಪ್ರತಿನಿಧಿಸುವ ರಾಜಕೀಯ ನಾಯಕರು...