ತಂತ್ರಜ್ಞಾನ ಸಂಯೋಜಿತ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWSDB), 24/7 ಕಾಲ್ ಸೆಂಟರ್ ದೇಶದ ದೊಡ್ಡ ಸಾಧನೆ

0 Comment
953 Views

ಬಿಬಿಎಂಪಿ ಹೊರತುಪಡಿಸಿ, 213 ನಗರ ಸ್ಥಳೀಯ ಅಗತ್ಯಗಳನ್ನು ಬಗೆಹರಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (KUWSDB) ಕೇಂದ್ರೀಕೃತ ನಿಯಂತ್ರಣ ಕೊಠಡಿ ಮತ್ತು ಪ್ರತಿಕ್ರಿಯೆ ಕೇಂದ್ರವನ್ನು (CCRRC) ಮಾರ್ಚ್ 30, 2015 ರಂದು ಪ್ರಾರಂಭಿಸಲಾಯಿತು.

ನಿಯಂತ್ರಣಾ ಕೊಠಡಿ ಎಲ್ಲಾ ನೀರಿನ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ. ಗ್ರಾಹಕರು ದಿನದ 24 ಗಂಟೆಗಳು CCRRC ಸರ್ವರ್ ಗಳಿಗೆ ಕರೆ ಮಾಡುವುದರ ಜೊತೆಗೆ SMS ಅಥವಾ WhatsApp ಅನ್ನು ಸಹ ಕಳುಹಿಸಬಹುದು. ನಿಯಂತ್ರಣ ಕೊಠಡಿ ಸಂಖ್ಯೆ 080-40001000 ಆಗಿರುತ್ತದೆ , WhatsApp ಸಂದೇಶಗಳನ್ನು ಕಳುಹಿಸಬಹುದು ಅಥವಾ 9880655555 ಸಂಖ್ಯೆಗೆ ಕರೆ ಮಾಡಬಹುದು, ಎಸ್ಎಂಎಸ್ ಅನ್ನು 9220092200 ಗೆ ನಿರ್ದಿಷ್ಟ ರೀತಿಯಲ್ಲಿ ಕಳುಹಿಸಬಹುದು, ದೂರುಗಳನ್ನು waterboard161@gmail.com ಅಥವಾ ocr.kuwsdb.org ಗೆ ಲಾಗಿನ್ ಮಾಡಿ ಇಮೇಲ್ ಮಾಡುವ ಮೂಲಕ ಕಳುಹಿಸಬಹುದು.

ಯಾವುದೇ ಭಾರತೀಯ ಭಾಷೆಯಲ್ಲಿ ದೂರುಗಳನ್ನು ಸಲ್ಲಿಸಬಹುದು. ಟೆಂಡರ್ ಡಾಕ್ಯುಮೆಂಟ್ ವಿವರಗಳು, ಪ್ರದೇಶದಲ್ಲಿನ ನೀರು ಸರಬರಾಜು, ಗುತ್ತಿಗೆದಾರ ಸಮಸ್ಯೆ, ಮೀಟರ್ ಸಂಬಂಧಿತ ಸಮಸ್ಯೆ, ಅನಾರೋಗ್ಯಕರ ನೀರು ಸರಬರಾಜು ಮತ್ತು ಇನ್ನಿತರ ಯಾವುದೇ ನೀರಿನ ಸಂಬಂಧಿತ ವಿಷಯದ ಬಗ್ಗೆ ಸಹಾಯ ಪಡೆಯಬಹುದು, ಬಿಬಿಎಂಪಿ ಮಿತಿಗಳಿಂದ ಬಂದ ದೂರುಗಳಿಗೆ ಈಗಾಗಲೇ ಮೀಸಲಾದ 080-22238888. ಹೆಲ್ಪ್ಲೈನ್ ​​ಸಂಖ್ಯೆಗೆ ಕರೆ ಮಾಡಬಹುದು.

ದೂರುಗಳಿಗೆ ಡಾಕೆಟ್ ಸಂಖ್ಯೆಯನ್ನು ಮಂಜೂರು ಮಾಡಲಾಗುತ್ತದೆ, ಇದರ ಮೂಲಕ ದೂರಿನ ಸ್ಥಿತಿ ಗತಿಗಳನ್ನು ತಿಳಿಯಬಹುದು,

ನಗರ ಅಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಇದು ಭಾರತದಲ್ಲಿ ಮೊಟ್ಟ ಮೊದಲ ಪ್ರಯತ್ನ ನಿಯಂತ್ರಣ ಕೊಠಡಿ ಎಲ್ಲರಿಗು ಮುಕ್ತವಾಗಿ ಸಹಾಯ ಮಾಡಲು ನಿಂತಿದ್ದು KUWSDB ಮತ್ತು ಅದರ ಎಲ್ಲ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ನಿಯಂತ್ರಣ ಕೊಠಡಿಯ ವ್ಯಾಪ್ತಿಯ ಅಡಿಯಲ್ಲಿ ಗ್ರಾಮದ ನೀರಿನ ಪೂರೈಕೆ ವಿವರಗಳನ್ನು ಸೇರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಮಾತುಕತೆ ನಡೆಯುತ್ತಿದೆಯೆಂದು KUWSDB ಅಧ್ಯಕ್ಷ ಜಿ ಸಿ ಚಂದ್ರಶೇಖರ್ ಹೇಳಿದರು. ಇದು ಮುಖ್ಯ ಕಚೇರಿಯಲ್ಲಿ ಸಿಬ್ಬಂದಿಗಳನ್ನು ಕ್ಷೇತ್ರ ಸಿಬ್ಬಂದಿಗಳು ಹೇಗೆ ಕಾರ್ಯಯೋಜನೆ ಮಾಡುತ್ತಿದ್ದಾರೆ ಎಂಬುದರ ಮಾಹಿತಿ ಇಡಲು ಸಹಕರಿಸುತ್ತದೆ.

ಇದರ ಮೂಲಕ, ಗುಣಮಟ್ಟ ಮತ್ತು ನಿರ್ವಹಣೆಯ ಮೇಲೆ ಗ್ರಾಹಕರ ಸೇವಾನುಭವದ ಆಧಾರದ ಮೇಲೆ ಕಾರ್ಯ ತಂತ್ರ ರೂಪಿಸಬಹುದು, ಬಿಬಿಎಂಪಿ ಹೊರತುಪಡಿಸಿ, 213 ನಗರ ಸ್ಥಳೀಯ ಸಂಸ್ಥೆಗಳ ಅಗತ್ಯಗಳನ್ನು ಬಗೆಹರಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೇಂದ್ರೀಕೃತ ನಿಯಂತ್ರಣ ಕೊಠಡಿ ಮತ್ತು ಪ್ರತಿಕ್ರಿಯೆ ಕೇಂದ್ರ (ಸಿ.ಸಿ.ಆರ್.ಆರ್.ಆರ್.ಸಿ) ಯನ್ನು ರೂಪಿಸಲಾಗಿದೆ.

24/7 ಕಂಟ್ರೋಲ್ ರೂಮ್ ಮತ್ತು ಹೆಲ್ಪ್ಲೈನ್, ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಜನರ ಸಮಸ್ಯೆಗಳನ್ನು ಜೀವನವನ್ನು ಸರಳಗೊಳಿಸಲು ಸಹಾಯ ಮಾಡುತ್ತಿದೆ ,

ಅಂತರ್ಜಾಲದ ಆಧಾರಿತ ಲೆಕ್ಕಪತ್ರ ವ್ಯವಸ್ಥೆಯನ್ನು ಒದಗಿಸುವ ಅನಾಲಿಟಿಕ್ಸ್ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಮೊದಲು.


ತಮ್ಮ ಮಾತೃಭಾಷೆ ಕನ್ನಡದಲ್ಲಿ ಜಿ.ಸಿ ಚಂದ್ರಶೇಖರ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು

ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಎಲ್ಲಾ ಮೂರು ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಗಳನ್ನು ಗೆದ್ದುಕೊಂಡರು...