ಚೆನ್ನೈ ಪ್ರವಾಹದಲ್ಲಿ ತೊಂದರೆಯಾದವರನ್ನು ರಕ್ಷಿಸಲು ಬೆಂಗಳೂರಿನ 24 × 7 ಗಂಟೆ ಕೆಲಸ ಮಾಡಿದ ನಿಯಂತ್ರಣ ಕೊಠಡಿ
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (KUWSDB) ಕಚೇರಿ ಚೆನ್ನೈನಲ್ಲಿ ಪ್ರವಾಹದಿಂದ ತೊಂದರೆಗೊಳಗಾದವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವ ಸ್ವಯಂಸೇವಕರ ಸಾಕಷ್ಟು ಚಟುವಟಿಕೆಗಳಲ್ಲಿ ನಿರತರಾಗಿದ್ದರು, ಚೆನ್ನೈನಲ್ಲಿ ಪ್ರವಾಹದ ನಂತರ ಕಚೇರಿ ತಾತ್ಕಾಲಿಕವಾಗಿ 24 × 7 ಗಂಟೆ ಕೆಲಸ ಮಾಡುವ ಒಂದು ನಿಯಂತ್ರಣ ಕೊಠಡಿಯಾಗಿ ಪರಿವರ್ತನೆಗೊಂಡಿತ್ತು.
ಬೆಂಗಳೂರಿನಲ್ಲಿ ನೆಲೆಸಿರುವ ಜನರು ಚೆನ್ನೈ ಪ್ರವಾಹದಲ್ಲಿ ಸಿಲುಕಿದವರನ್ನು ತಲುಪಲು ತೀವ್ರವಾಗಿ ಪ್ರಯತ್ನಿಸುತ್ತಿರುವ ಅಧಿಕಾರಿಗಳು, ಪರಿಹಾರ ಕಾರ್ಯವನ್ನು ಕೈಗೊಳ್ಳಲು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಬಳಸುತ್ತಿದ್ದಾರೆ.
ಚೆನ್ನೈ ಪ್ರವಾಹ ನಿಯಂತ್ರಣ ಕೊಠಡಿಯ ಆರು ಗಂಟೆಗಳೊಳಗೆ. ಸುಮಾರು 9000 ಕರೆಗಳನ್ನು 6 ಗಂಟೆಗಳಲ್ಲಿ ಸ್ವೀಕರಿಸಿತ್ತು ,ಸ್ವಯಂಸೇವಕರ ಈ ಪ್ರಯತ್ನಗಳ ಬಗ್ಗೆ ಸುದ್ದಿಯನ್ನು ಹರಡಲು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಅನ್ನು ಬಳಸಿತ್ತು , ಬೆಂಗಳೂರಿನಲ್ಲಿ ಸುಮಾರು 30 ಸ್ವಯಂಸೇವಕರು 3 ಶಿಫ್ಟ್ಗಳಲ್ಲಿ ಕೆಲಸ ಮಾಡಿದ್ದರು.
KUWSDB ಯ ಅಧ್ಯಕ್ಷ ಜಿ.ಸಿ. ಚಂದ್ರಶೇಕರ್ ರವರು ಈ ಸಂಪೂರ್ಣ ಪ್ರಯತ್ನವನ್ನು ಬೆಂಬಲಿಸಿದ್ದರು, ಬೆಂಗಳೂರಿನ ನಿವಾಸಿಗಳಲ್ಲದೆ ,ಹಿರಿಯ ನಾಗರಿಕ ಸೇವ ಅಧಿಕಾರಿಗಳು ಸಹ ಈ ಕಾರ್ಯವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು.
ನಿಯಂತ್ರಣ ಕೊಠಡಿಯಲ್ಲಿ 30 ಟೆಲಿಫೋನ್ ಲೈನ್ ಗಳು, 2 ವಾಟ್ಸಾಪ್ ಸಂಖ್ಯೆಗಳು, ಫ್ಯಾಕ್ಸ್, ಪೋಟೋ ನಕಲು ಯಂತ್ರಗಳು, ಪ್ಲೋಟರ್, ಮುದ್ರಕಗಳು, 30 ಕಂಪ್ಯೂಟರ್ಗಳು, 15 ಮೊಬೈಲ್ ಫೋನ್ ಲೈನ್ಗಳು ಮತ್ತು ಒಂದು ಎಸ್ಎಂಎಸ್ ಗೇಟ್ ವೆ ಜೊತೆಗೆ ಒಂದು HAM (ಹವ್ಯಾಸಿ ರೇಡಿಯೊ) ಸಂಪರ್ಕವನ್ನು ಸಹ ತಂಡ ಚೆನ್ನೈನಲ್ಲಿ ಪ್ರವಾಹದಿಂದ ತೊಂದರೆಗೊಳಗಾದವರನ್ನು ತಲುಪಲು ಬಳಸಲಾಗಿತ್ತು.
ನಿಯಂತ್ರಣ ಕೋಣೆಯಲ್ಲಿರುವ ತಂಡವು ಚೆನ್ನೈನಲ್ಲಿ ಕಾರ್ಯಕ್ಕೆ ಇಳಿದಿದ್ದ ಸ್ವಯಂ ಸೇವಕ ತಂಡ ಹಾಗು ತೊಂದರೆಯಲ್ಲಿರುವ ಜನರನ್ನು ಸಂಪರ್ಕಿಸಲು ನಿರಂತರ ಪ್ರಯತ್ನಪಡುತ್ತಿದ್ದರು .
KUWSDB ಯ ಸ್ವಯಂ ಸೇವಕರ ತಂಡ ಪಟ್ಟ ಪ್ರಯತ್ನಕ್ಕೆ ಸಿಕ್ಕ ಯಶಸ್ಸೇನ್ದರೆ ಗೂಗಲ್ ಸರ್ಚ್ ಇಂಜಿನ್ ನಲ್ಲಿ ಚೆನ್ನೈ ಪ್ರವಾಹದಲ್ಲಿ ಸಿಲುಕಿದವರಿಗೆ ಸಹಾಯಕ್ಕಾಗಿ ಮೊದಲ ಆಯ್ಕೆಯಾಗಿ KUWSDB ನಿಯಂತ್ರಣ ಕೊಠಡಿಯ ಸಂಖ್ಯೆಯನ್ನು ತೋರಿಸುತ್ತಿತ್ತು