ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ( KUWSDB) ಅಧ್ಯಕ್ಷ ಜಿ.ಸಿ ಚಂದ್ರಶೇಖರ್ ‘ಗಾರ್ಡ್ಆಫ್ ಹಾನರ್’ ಗೌರವ ಪಡೆದರು

0 Comment
1283 Views

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ( KUWSDB) ಅಧ್ಯಕ್ಷ ಜಿ.ಸಿ ಚಂದ್ರಶೇಖರ್ ಅವರ ಅಧಿಕಾರಾವಧಿಯ ಸಮಯದಲ್ಲಿ ಹಣಕಾಸು ಮತ್ತು ಆಡಳಿತದ ದೃಷ್ಟಿಯಿಂದ ಇಲಾಖೆ ಸಾಕಷ್ಟು ಸಾಧನೆಗಳನ್ನು ಮಾಡಿತು.

10 ವರ್ಷಗಳಿಂದ ಬಾಕಿ ಉಳಿದಿದ್ದ 50 ಯೋಜನೆಗಳ ಪರಿಷ್ಕೃತ ವೆಚ್ಚವನ್ನು ತುಲನೆ ಮಾಡಲು ಕ್ರಮಕೈಗೊಳ್ಳಲಾಯಿತು, ಆರ್ಥಿಕ ಪ್ರಗತಿಯನ್ನು ಸಾಧಿಸಲು ಲಭ್ಯವಿರುವ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯ ಜೊತೆಗೆ ಮಂಡಳಿಯ ವೆಚ್ಚವನ್ನು ಕಡಿಮೆಗೊಳಿಸಲು ಹೊರಗುತ್ತಿಗೆಯನ್ನು ಕಡಿಮೆಗೊಳಿಸುವ ಮೂಲಕ ಮತ್ತು ಸಿಬ್ಬಂದಿ ಸದಸ್ಯರಿಗೆ ಲಭ್ಯವಿರುವ ಗರಿಷ್ಠ ಪರಿಣತಿಯನ್ನು ಗರಿಷ್ಠ ಮಟ್ಟಕ್ಕೆ ಉಪಯೋಗಿಸುವ ಮೂಲಕ ಅನುಷ್ಠಾನಕ್ಕೆ ತರಲಾಯಿತು .

ಅಧಿಕಾರದಲ್ಲಿ ಪಾರದರ್ಶಕತೆ ,ಉತ್ತಮ ಆಡಳಿತದ ಸೂಚಕ, ಮೊಬೈಲ್ ಆಧಾರಿತ ಅಪ್ಲಿಕೇಶನ್ಗಳ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲಾಯಿತು , ಹೊಸ ಮಾದರಿಯ ಬಿಲ್ ಪಾವತಿಸುವ ವಿಧಾನ , ಈ ಅಪ್ಲಿಕೇಶನ್ಗಳು ಸಾರ್ವಜನಿಕ, ಸಿಬ್ಬಂದಿ ಮತ್ತು ಗುತ್ತಿಗೆದಾರರಿಗೆ ತೆರೆದಿರುತ್ತದೆ , ನಗರ ಅಭಿವೃದ್ಧಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ನಿಯಂತ್ರಣ ಇಲಾಖೆಯ ನಡುವೆ ಅಂತರಸಂಪರ್ಕವನ್ನು ಕೂಡಾ ವೆಬ್ ಆಧಾರಿತ ಪಾರದರ್ಶಕತೆಯನ್ನು ಸೃಷ್ಟಿಲಾಯಿತು, ಆಡಳಿತ ಕ್ಷೇತ್ರದ ಹಲವು ಸಾಧನೆಗಳನ್ನು ತಂದ ರಾಜ್ಯದಲ್ಲಿನ ಮೊದಲ ಸರ್ಕಾರಿ ಸಂಸ್ಥೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಾಗಿದೆ.

ಗೌರವಾನ್ವಿತ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ( KUWSDB) ಅಧ್ಯಕ್ಷ ಜಿ.ಸಿ. ಚಂದ್ರಶೇಖರ್ ಮತ್ತು ವ್ಯವಸ್ಥಾಪಕ ನಿರ್ದೇಶಕ 2016 ರ ಜನವರಿ 26 ರಂದು 67 ನೆಯ ಗಣರಾಜ್ಯ ದಿನದಂದು ಮಿಲಿಟರಿ ಗೌರವವನ್ನು ಪಡೆದರು. ಕಾಮನ್ ವೆಲ್ತ್ ದೇಶಗಳಲ್ಲಿ ಆಚರಿಸುವ ‘ಗಾರ್ಡ್ಆಫ್ ಹಾನರ್’ ಅತ್ಯುನ್ನತ ಔಪಚಾರಿಕ ಆಚರಣೆಯಾಗಿದೆ

ಗಣ್ಯರು, ಅಧಿಕಾರಿಗಳು, ನಾಗರಿಕ ಸೇವಕರು ಮತ್ತು ರಾಜ್ಯಗಳ ಮುಖ್ಯಸ್ಥರಿಗೆ ಮಿಲಿಟರಿಯಿಂದ ಬಂದ ಅನೇಕ ಸಿಬ್ಬಂದಿಗಳು ಗೌರವವನ್ನು ಸಲ್ಲಿಸುತ್ತಾರೆ .


ತಮ್ಮ ಮಾತೃಭಾಷೆ ಕನ್ನಡದಲ್ಲಿ ಜಿ.ಸಿ ಚಂದ್ರಶೇಖರ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು

ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಎಲ್ಲಾ ಮೂರು ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಗಳನ್ನು ಗೆದ್ದುಕೊಂಡರು...

ದೂರದೃಷ್ಟಿತ್ವ ಹೊಂದಿರುವ ಅಧ್ಯಕ್ಷರು ಇದ್ದರೆ ನಮ್ಮ ಗುರಿ ತಲುಪುವುದು ತುಂಬಾ ಸುಲಭ

ಪ್ರಜಾಪ್ರಭುತ್ವದ ಆಶ್ಚರ್ಯಕರ ಸಂಗತಿಗಳಲ್ಲಿ ಮಹತ್ತರ ವಿಷಯವೇನೆಂದರೆ ಜನರ ದೃಷ್ಟಿಕೋನವನ್ನು ಪ್ರತಿನಿಧಿಸುವ ರಾಜಕೀಯ ನಾಯಕರು...